ಟಾಟಾ ನ್ಯಾನೊ ೨೦೦೮ರ ಜನವರಿಯಲ್ಲಿ ಜಗತ್ತಿಗೆ ಪರಿಚಯಿಸಲ್ಪಟ್ಟ ಅಗ್ಗದ ಬೆಲೆಯ ಕಾರು. == ನ್ಯಾನೊ ಕಾರು == ಭಾರತದ ಬೃಹತ್ ಉದ್ದಿಮೆದಾರ ಟಾಟಾ ಮೋಟಾರ್ಸ್ ಸಂಸ್ಥೆ ತಯಾರಿಸಿರುವ ಸಣ್ಣ ಬಜೆಟ್‌ನ ಹೊಸ ಕಾರು ನ್ಯಾನೊ.ಈ ಕಾರನ್ನು ಜನವರಿ ೧೦,೨೦೦೮ರಂದು ದೆಹಲಿಯ 'ಅಂತರ್ರಾಷ್ಟ್ರೀಯ ವಾಹನ ಮೇಳ' ಎಕ್ಸ್‌‍‍ಪೋ - ೨೦೦೮ರಲ್ಲಿ ಟಾಟಾ ಸಂಸ್ಥೆಯ ಅಧ್ಯಕ್ಷ ರತನ್ ಟಾಟಾ ಅನಾವರಣಗೊಳಿಸಿದರು.ಜಗತ್ತಿನ ಅತ್ಯಂತ ಕಡಿಮೆ ಬೆಲೆಯ ನ್ಯಾನೊ ಕಾರು ,ಕಾರು ಉದ್ದಿಮೆಯಲ್ಲಿ ಹೊಸ ಸಂಚಲನವನ್ನು ಉಂಟುಮಾಡಿದೆ. == ಸೃಷ್ಟಿಗೆ ಪ್ರೇರಣೆ == ಸ್ಕೂಟರ್ ಅಥವಾ ಬೈಕ್‌ನಲ್ಲಿ ನಾಲ್ಕು ಜನರ ಪುಟ್ಟ ಸಂಸಾರವಿಡೀ ಓಡಾಡುವ ಅಪಾಯಕಾರಿ ದೃಶ್ಯವನ್ನು ಕಂಡ ದಿನವೇ ರತನ್ ಟಾಟಾ ಮನಸ್ಸಿನಲ್ಲಿ ನ್ಯಾನೊ ಕಾರಿನ ಕಲ್ಪನೆ ಮೂಡಿತು.ನಾಲ್ಕು ವರ್ಷಗಳ ಸತತ ಚಿಂತನೆ,ಶ್ರಮ,ಪರಿಕಲ್ಪನೆಗಳ ಸಾಕಾರವೇ ನ್ಯಾನೊ ಕಾರು. == ವೈಶಿಷ್ಟ್ಯಗಳು == ನ್ಯಾನೊ ಕಾರಿನ ಷೋರೂಂ ಬೆಲೆ ೧ ಲಕ್ಷ ರೂ. ೩ ವಿಭಿನ್ನ ಶ್ರೇಣಿಗಳಲ್ಲಿ ಲಭ್ಯ. ಕಾರಿನ ಗಾತ್ರ - ೩.೧ ಮೀ. ಉದ್ದ, ೧.೫ ಮೀ. ಅಗಲ, ೧.೮ ಮೀ.ಎತ್ತರ. ಮಾರುಕಟ್ಟೆಯಲ್ಲಿರುವ ಇದೇ ಮಾದರಿಯ ಇತರ ಕಾರುಗಳಿಗಿಂತ ಒಳ ವಿಸ್ತಾರ ಶೇಕಡಾ ೨೧%ರಷ್ಟು ಹೆಚ್ಚಳ. ಪ್ರತಿ ಲೀಟರ್‌ಗೆ ೨೦ ಕಿ.ಮೀ. ಮೈಲೇಜ್. ಹಿಂಬದಿ ಎಂಜಿನ್, ೪ ಗೇರ್, ಟ್ಯೂಬ್‌ರಹಿತ ಟೈರುಗಳು. ೪ ಜನರಿಗೆ ಆಸನಗಳು, ೩೦ ಲೀ.ಪೆಟ್ರೋಲ್ ತುಂಬಿಸುವ ಸಾಮರ್ಥ್ಯ. == ತಯಾರಿಕೆ == ಟಾಟಾ ಮೋಟಾರ್ಸ್ ಸಂಸ್ಥೆ ತನ್ನ ಪಶ್ಚಿಮ ಬಂಗಾಳ ಹಾಗೂ ಉತ್ತರಾಖಂಡದ ಉತ್ಪಾದನಾ ಘಟಕಗಳಲ್ಲಿ ನ್ಯಾನೊ ಕಾರು ಉತ್ಪಾದಿಸಲಿದೆ.ಸೆಪ್ಟೆಂಬರ್ ೨೦೦೮ರ ವೇಳೆಗೆ ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದೆ.